ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದ ಮಗನ ಬಂಧನ..!

Published on

spot_img
spot_img

ವಿವೇಕವಾರ್ತೆ ಕ್ರೈಂ ಡೆಸ್ಕ್- ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಪಾಪಿ ಮಗನನ್ನು ಬೆಂಗಳೂರಿನ ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾನ್ ಡಿ ಕ್ರೂಸ್ ಎಂಬ 65 ವರ್ಷದ ವ್ಯಕ್ತಿ ತನ್ನ 88 ವರ್ಷದ, ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿ ಜೈಲು ಪಾಲಾಗಿದ್ದಾನೆ.

88 ವರ್ಷದ ಕ್ಯಾಥರಿನ್​ಗೆ ನಾಲ್ವರು ಮಕ್ಕಳಿದ್ದು ನಾಲ್ವರ ಪೈಕಿ ಮೊದಲನೆಯವ ಆರೋಪಿ ಜಾನ್, ಇನ್ನಿಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿದ್ದಾರೆ. ಮತ್ತೋರ್ವ ಪುತ್ರಿ ಆಶ್ರಮದಲ್ಲಿದ್ದಾರೆ.

ಕ್ಯಾಥರಿನ್ ಅವರು ಮೊದಲ ಮಗನ ಹೆಸರಿಗೆ ಆಸ್ತಿ ಬರೆದಿದ್ದರು. ವಯಸ್ಸಾದ ಕಾರಣ ಕ್ಯಾಥರಿನ್ ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು. ಉಸಿರಾಟದ ಸಮಸ್ಯೆ ಹಿನ್ನೆಲೆ ಆಕೆಗೆ ನಿರಂತರ ಆಕ್ಸಿಜನ್ ಪೂರೈಕೆ ಅಗತ್ಯ ಇತ್ತು. ಹೀಗಾಗಿ ಅಮೆರಿಕಾದ ಮಗ ತಾಯಿಯನ್ನು ನೋಡಿಕೊಳ್ಳಲು ಬೆಂಗಳೂರಿಗೆ ಕೇರ್ ಟೇಕರ್ ಕಳಿಸಿದ್ದರು. ಆದ್ರೆ ಮತ್ತೊಂದು ಕಡೆ ಜಾನ್ ಗೆ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಆತನಿಗೆ ಕೋಪ ಇತ್ತು.

ಇದೇ ವಿಚಾರವಾಗಿ ತಾಯಿ ಜೊತೆ ಆಗಾಗ ಜಗಳ ಮಾಡುತಿದ್ದ. ಸೆ.29ರಂದು ಸಂಜೆ ಮನೆಗೆ ನುಗ್ಗಿದ್ದ ಜಾನ್​ ಗಲಾಟೆ ಮಾಡಿದ್ದಾನೆ. ಕೇರ್ ಟೇಕರ್ ಹೊರಗೆ ತಳ್ಳಿ ತಾಯಿ ಕೊಲೆಗೆ ಯತ್ನಿಸಿದ್ದಾನೆ. ತಾಯಿ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೇರ್ ಟೇಕರ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ವೃದ್ಧೆಯನ್ನ ರಕ್ಷಿಸಿದ್ದ R.T.ನಗರ ಪೊಲೀಸರು ಕೇರ್ ಟೇಕರ್ ದೂರಿನ ಮೇರೆಗೆ ಜಾನ್ ಡಿ ಕ್ರೂಸ್ ಸೆರೆ ಹಿಡಿದಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!