ವಿವೇಕವಾರ್ತೆ : ವಿದ್ಯಾರ್ಥಿಯೋರ್ವ ಶಿಕ್ಷಕರಿಗೆ ವರ್ಗ ಕೊಣೆಯಲ್ಲಿಯೇ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುವ ವಿಲಕ್ಷಣಕಾರಿ ಘಟನೆಯೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಹಲ್ಲೆ ಮಾಡುತ್ತಿರುವ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕಳವಳ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿಯೋದಲ್ಲಿ ವರ್ಗ ಕೊಣೆಯಲ್ಲಿಯೇ ವಿದ್ಯಾರ್ಥಿಯೋರ್ವ ಪಾಠ ಮಾಡುತ್ತಿರುವ ಶಿಕ್ಷಕರೊಬ್ಬರ ಮೇಲೆ ಏಕಾಏಕಿ ದಾಳಿ ಮಾಡಿ ತನ್ನ ಚಪ್ಪಲಿಯಿಂದ ಹೊಡೆಯಲು ಶುರು ಮಾಡುತ್ತಾನೆ. ವಿದ್ಯಾರ್ಥಿಯ ಹಲ್ಲೆಯಿಂದ ಶಿಕ್ಷಕ ತಪ್ಪಿಸಿಕೊಳ್ಳಲು ಬೇರೆಡೆ ಹೋದರು ಬಿಡದ ವಿದ್ಯಾರ್ಥಿ ಹಲ್ಲೆ ಮಾಡಲು ಮುಂದುವರೆಸುತ್ತಾನೆ.
ಈ ಘಟನೆಯು ಫಿಸಿಕ್ಸ್ವಾಲಾ ಎಂಬ ಆನ್ಲೈನ್ ಕ್ಲಾಸ್ನಲ್ಲಿ ನಡೆದಿದೆ ಎಂದು ಗೊತ್ತಾಗುತ್ತದೆ. ವಿದ್ಯಾರ್ಥಿಯು ಯಾವ ಕಾರಣಕ್ಕೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ಇನ್ನೂ ನಿಗೂಢವಾಗಿದೆ.
ಫಿಸಿಕ್ಸ್ವಾಲಾ ಅಪ್ಲಿಕೇಶನ್ ತನ್ನ ಶೈಕ್ಷಣಿಕ ವಿಷಯ ಮತ್ತು ಬೆಂಬಲಕ್ಕಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಆದರೆ, ಹಲ್ಲೆಯ ವಿಡಿಯೋ ಡಿಜಿಟಲ್ ಯುಗದಲ್ಲಿ ಶಿಕ್ಷಣತಜ್ಞರು ಎದುರಿಸುತ್ತಿರುವ ಸವಾಲುಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. (ಎಜೇನ್ಸಿಸ್)