ವಿವೇಕವಾರ್ತೆ: ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ಖಾಸಗಿ ಶಾಲೆಯೊಂದರ ಅಪ್ರಾಪ್ತ ಬಾಲಕಿಯೊಬ್ಬಳನ್ನು ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡ ಆಪಾದನೆ ಮೇಲೆ ಶಾಲೆಯ ಶಿಕ್ಷಕ ಶಿವಕುಮಾರ್ ಅವರನ್ನು ಗೌನಿಪಲ್ಲಿ ಪೊಲೀಸರು ಬಂಧಿಸಿದ್ದಾರೆ.
‘ಅಡ್ಡಗಲ್ ಗ್ರಾಮದ ಶಾಲೆಯಲ್ಲಿ ಕಲಿಯುತ್ತಿರುವ ಮಗಳು ಮನೆಗೆ ಬಂದು ಹೊಟ್ಟೆ ನೋವೆಂದು ಹೇಳಿದಳು.
ಚಿಂತಾಮಣಿ ಆಸ್ಪತ್ರೆಯಲ್ಲಿ ತೋರಿಸಿದೆವು. ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭ ಧರಿಸಿರುವ ವಿಷಯ ತಿಳಿದು ಬಂತು. ಆ ಬಗ್ಗೆ ವಿಚಾರಿಸಿದಾಗ ಅದೇ ಶಾಲೆಯ ಶಿಕ್ಷಕ ಶಿವಕುಮಾರ್, ಬಾಲಕಿಯನ್ನು ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ತಿಳಿದುಬಂದಿತು. ಗರ್ಭ ಧರಿಸಲು ಕಾರಣನಾದ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಾಲಕಿ ತಂದೆ ಶನಿವಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗೌನಿಪಲ್ಲಿ ಪೊಲೀಸರು ಆರೋಪಿ ಶಿಕ್ಷಕ ಶಿವಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.