Crime ಬ್ಯೂರೋ ವಿವೇಕವಾರ್ತೆ – ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ 13 ರಿಂದ 15 ವರ್ಷದೊಳಗಿನ 6 ಹುಡುಗರನ್ನು ಬಂಧಿಸಿರುವ ಘಟನೆ ದಕ್ಷಿಣ ಅಸ್ಸಾಂನ ಕರೀಂಗಂಜ್‌ನಲ್ಲಿ ನಡೆದಿದೆ.
ಪೊಲೀಸರ (Police) ಪ್ರಕಾರ, ಸಂತ್ರಸ್ತ ಬಾಲಕಿ ನವೆಂಬರ್ 1ರಂದು ಅತ್ಯಾಚಾರ ನಡೆದಿರುವುದಾಗಿ ರಾಮಕೃಷ್ಣನಗರದ ಕಾಳಿನಗರ ಪೊಲೀಸ್ ಠಾಣೆಯಲ್ಲಿ (Assam Police Station) ದೂರು ದಾಖಲಿಸಿದ್ದಳು. ಪ್ರಕರಣ (FIR) ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದಾಗ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದಳು. ನಂತರ ಮನೆಗೆ ನುಗಿದ್ದ ಹುಡುಗರು ಬಲವಂತವಾಗಿ ಆಕೆಯನ್ನು ಹಿಡಿದು ಒಬ್ಬೊಬ್ಬರೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದ ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ (Mobile) ಸೆರೆಹಿಡಿದಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ಹೆಚ್ಚು ಆತಂಕಗೊಂಡಿದ್ದರಿಂದ ಯಾರಿಗೂ ಹೇಳಿರಲಿಲ್ಲ. ನಂತರ ಪೋಷಕರು ಸಮಾಧಾನಪಡಿಸಿ ದೂರು ಕೊಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಾರ್ಥ ಪ್ರತಿಮ್ ದಾಸ್ ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದು, ಕೃತ್ಯ ಸೆರೆಹಿಡಿದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆದರೆ ಕೃತ್ಯ ಎಸಗಿರುವವರ ಪೈಕಿ ಓರ್ವ ಇತರರೊಂದಿಗೆ ವೀಡಿಯೋ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪೋಕ್ಸೋ ಕಾಯ್ದೆ (POCSO Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.