ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ.
ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28) ಅನುಮಾಸ್ಪದವಾಗಿ ಮನೆಯಲ್ಲಿ ಸಾವನಪ್ಪಿದ್ದಾರೆ.
ಡಾ.ಸಿಂದುಜಾ ಅವರಿಗೆ ಜನವರಿ ತಿಂಗಳಲ್ಲಿ ಚೆನೈ ವ್ಯಕ್ತಿಯೊಂದಿಗೆ ವಿವಾಹಕ್ಕೆ ಸಿದ್ದತೆಯಾಗಿತ್ತು.
ಡಾ. ಸಿಂದುಜಾ ಇಂದು ಬಂದ್ ಕರೆ ನೀಡಿದ್ದರೂ ಸಹ ಎಂದಿನಂತೆ ಸರ್ಕಾರಿ ಆಸ್ಪತ್ರಗೆ ಬರಬೇಕಾಗಿತ್ತು, ಆದರೆ ಬರದೇ ಇದ್ದಾಗ ಆಸ್ಪತ್ರೆ ಸಿಬ್ಬಂದಿ ಫೋನ್ ಕಾಲ್ ಮಾಡಿದ್ದಾರೆ. ಆದರೆ ಕಾಲ್ ಸ್ವೀಕರಿಸದ ಹಿನ್ನಲೆ ಮನೆಗೆ ಬಂದು ಕರೆದರೂ ಬಾಗಿಲು ತೆರೆಯದ ಪರಿನಾಮ ಅನುಮಾನಗೊಂಡು ಆಸ್ಪತ್ರೆಯವರು ಆಕೆಯ ಮನೆಯ ಕಿಟಕಿಯಲ್ಲಿ ನೋಡಿದಾಗ ಸತ್ತು ಬಿದ್ದಿರುವುದು ಕಂಡು ಗಾಬರಿಗೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಮೃತ ವೈದ್ಯರ ಪೋಷಕರು ಚೆನೈನಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಡಾ. ಸಿಂದುಜಾ ಮಲಗಿರುವ ಸ್ಥಳದಲ್ಲಿ ಇಂಜೆಕ್ಷನ್ ಸಿರೀಂಜ್ ಪತ್ತೆಯಾಗಿದೆ. ಈ ಬಗ್ಗೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.