Wednesday, September 27, 2023

ಅದೃಷ್ಟ ಬದಲಿಸಿತು 60 ವರ್ಷದ ಹಿಂದಿನ ತಂದೆಯ ಪಾಸ್‌ಬುಕ್‌; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಗ

ವಿವೇಕವಾರ್ತೆ : ಮನುಷ್ಯನಿಗೆ ಅದೃಷ್ಟ ಹೇಗೆ, ಯಾವಾಗ ಒಲಿಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ಎಷ್ಟೋ ಬಾರಿ ನಾವು ಸಂಕಷ್ಟದಲ್ಲಿದ್ದಾಗ ಊಹಿಸದ ರೀತಿಯಲ್ಲಿ ಆರ್ಥಿಕ ನೆರವು ಸಿಗುವುದುಂಟು. ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಜನಿಸಿರುವ ನಾವು ರಾತ್ರೋ ರಾತ್ರಿ ಶ್ರೀಮಂತರಾದರೆ ಹೇಗೆ?

ಅದನ್ನು ಊಹಿಸಿಕೊಂಡರೆ ವಾವ್‌ ಎನ್ನಿಸುತ್ತದೆ ಅಲ್ವಾ? ಆದರೆ ಚಿಲಿಯ ದೇಶದ ವ್ಯಕ್ತಿಯೊಬ್ಬನ ಜೀವನದಲ್ಲಿ ಇದು ನಿಜ ಆಗಿದೆ. ಏನಿದು ಸ್ಟೋರಿ ಮುಂದೆ ಓದಿ.

ಚಿಲಿ ದೇಶದ ಎಕ್ಸಿಕ್ವಿಯೆಲ್ ಹಿನೊಜೋಸಾ ಎಂಬುವವರು ರಾತ್ರಿ ಬೆಳಗಾಗುವುದರ ಒಳಗೆ ಮಿಲೇನಿಯರ್‌ ಆಗುತ್ತಾರೆ. ಯಾರೂ ಕಲ್ಪಿಸಲೂ ಸಾಧ್ಯವಾಗದಂತೆ ಅವರ ಜೀವನ ಬದಲಾಗುತ್ತದೆ. ಗುಪ್ತ ಅತಿವಿದ್ದ ನಿಧಿಯೊಂದು ಅವರನ್ನು ಕೋಟ್ಯಾದಪತಿಯನ್ನಾಗಿಸುತ್ತದೆ. ಎಲ್ಲೋ ಮೂಲೆ ಸೇರಿದ್ದ ಆ ಒಂದು ವಸ್ತು ಎಕ್ಸಿಕ್ವಿಯೆಲ್‌ ಅವರನ್ನು ಮಿಲೇನಿಯರ್‌ ಪಟ್ಟಕ್ಕೆ ಏರಿಸುತ್ತದೆ. ಏನಿರಬಹುದು ಆ ವಸ್ತು ಎಂದು ಯೋಚಿಸ್ತಾ ಇದ್ದೀರಾ? ಅದೇನು ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದು ಖಂಡಿತ. ಎಕ್ಸಿಕ್ವಿಯೆಲ್‌ ಅವರು ಮಿಲೇನಿಯರ್‌ ಆಗುವಂತೆ ಮಾಡಿದ್ದು ವಜ್ರ, ಚಿನ್ನದ ಗಟ್ಟಿಯಲ್ಲ ಬದಲಾಗಿ ಆರು ದಶಕಗಳ ಹಿಂದಿನ ಅವರ ತಂದೆಯ ಬ್ಯಾಂಕ್‌ ಪಾಸ್‌ಬುಕ್‌.

ಪಾಸ್‌ ಸಿಕ್ಕಿದ್ದೇ ಆಶ್ಚರ್ಯ

ಎಕ್ಸಿಕ್ವಿಯೆಲ್ ಒಮ್ಮೆ ಮನೆ ಸ್ವಚ್ಛಗೊಳಿಸುತ್ತಿರುತ್ತಾರೆ. ಮನೆಯಲ್ಲಿನ ಹಳೆಯ ಸಾಮಾನುಗಳನ್ನು ಶೋಧಿಸುತ್ತಿರುವಾಗ ಒಂದು ವಸ್ತು ಕಣ್ಣಿಗೆ ಬೀಳುತ್ತದೆ. ಅದು ಒಂದು ಹಳೆಯ ಪಾಸ್‌ಬುಕ್‌ ಆಗಿರುತ್ತದೆ. ಅದನ್ನು ತೆಗೆದು ಕೊಡವಿ ನೋಡಿದಾಗ ಅವರಿಗೆ ಅರಿವಾಗುತ್ತದೆ, ಇದು ತನ್ನ ತಂದೆಯವರು ಬಹಳ ದಿನಗಳ ಹಿಂದೆ ಕಳೆದುಕೊಂಡ ಪಾಸ್‌ಬುಕ್‌ ಎಂಬುದು. ಅದು ಹಲವು ವರ್ಷಗಳಲ್ಲ, ದಶಕಗಳ ಹಿಂದಿನ ಪಾಸ್‌ಬುಕ್‌ ಆಗಿತ್ತು. ಈ ಬ್ಯಾಂಕ್‌ ಖಾತೆಯ ಬಗ್ಗೆ ಎಕ್ಸಿಕ್ವಿಯೆಲ್ ಅವರ ತಂದೆಗೆ ಮಾತ್ರ ತಿಳಿದಿತ್ತು. ಅವರು ಬೇರೆಯವರ ಬಳಿ ಹೇಳಿರಲಿಲ್ಲ. ಆದರೆ ಒಂದು ದಶಕದ ಹಿಂದೆ ಅವರು ಸಾವನ್ನಪ್ಪುತ್ತಾರೆ. ಅವರ ಸಾವಿನೊಂದಿಗೆ ಬ್ಯಾಂಕ್‌ ಖಾತೆಯ ಕಥೆಯೂ ಹುದುಗಿ ಹೋಗುತ್ತದೆ.

1960-70ರ ದಶಕದಲ್ಲಿ ಎಕ್ಸಿಕ್ವಿಯೆಲ್ ಅವರ ತಂದೆ ಸುಮಾರು 1.40 ಲಕ್ಷ ಚಿಲಿ ಪೆಸೊಗಳನ್ನು ಠೇವಣಿ ಇರಿಸಿದ್ದರು. ಅಲ್ಲದೇ, ಭವಿಷ್ಯದಲ್ಲಿ ಮನೆ ಖರೀದಿಸಬೇಕು ಎಂದು ಅವರು ಯೋಚಿಸಿದ್ದರು. ಅಂದಿನ ಆ ಠೇವಣಿ ಮೊತ್ತವು ಇಂದು ದ್ವಿಗುಣವಾಗಿತ್ತು.

ಆದರೆ ಎಕ್ಸಿಕ್ವಿಯೆಲ್ ಬ್ಯಾಡ್‌ಲಕ್‌ ನೋಡಿ, ಇವರ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಯಾಕೆಂದರೆ ಇವರ ತಂದೆ ಠೇವಣಿ ಇಟ್ಟ ಬ್ಯಾಂಕ್ ಅನ್ನು ಮುಚ್ಚಲಾಗಿತ್ತು. ಅಲ್ಲದೇ ಹಲವರು ಈ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರು. ಆದರೆ ಅವರೆಲ್ಲರದ್ದೂ ಇದೇ ಕತೆ ಆಗಿತ್ತು. ಆದರೆ ಎಕ್ಸಿಕ್ವಿಯೆಲ್ ಅವರದ್ದು, ಬ್ಯಾಡ್‌ಲುಕ್‌ ಆಗಿರಲಿಲ್ಲ. ಪಾಸ್‌ಬುಕ್‌ನಲ್ಲಿನ ಒಂದೇ ಒಂದು ಪದ ಅವರ ಅದೃಷ್ಟವನ್ನೇ ಬದಲಿಸಿತ್ತು. ಆ ಪದ ಯಾವುದೆಂದರೆ ʼಸ್ಟೇಟ್‌ ಗ್ಯಾರೆಂಟೀಡ್‌ʼ. ಅದರ ಪ್ರಕಾರ ಠೇವಣಿ ಹಣವನ್ನು ಪಾವತಿಸಲು ಬ್ಯಾಂಕ್‌ ವಿಫಲವಾದರೆ, ಸರ್ಕಾರ ಮರುಪಾವತಿ ಮಾಡಬೇಕು ಎಂಬುದಾಗಿದೆ.

ಕೊನೆಗೂ ಸಿಕ್ಕಿತು ಜಯ

ಆದರೆ ಈ ಗ್ಯಾರೆಂಟಿಯನ್ನು ತಿರಸ್ಕರಿಸಿದ ಸರ್ಕಾರ ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಇದರಿಂದ ಎಕ್ಸಿಕ್ವಿಯೆಲ್ ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆ. ಪ್ರಕರಣವನ್ನು ನ್ಯಾಯಲಯಕ್ಕೆ ಒಪ್ಪಿಸುತ್ತಾರೆ. ಈ ಹಣವು ತನ್ನ ತಂದೆ ಬಹಳ ಕಷ್ಟಪಟ್ಟು ಗಳಿಕೆ ಮಾಡಿದ್ದು, ಎಂದು ಭಾವನಾತ್ಮಕವಾಗಿ ವಾದಿಸುತ್ತಾರೆ.

ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಲಯವು ಎಕ್ಸಿಕ್ವಿಯೆಲ್ ಪರವಾಗಿ ತೀರ್ಪು ನೀಡುತ್ತದೆ. ಅಲ್ಲದೆ ನ್ಯಾಯಾಲಯವು ಅವರಿಗೆ 1.2 ಮಿಲಿಯನ್‌ ಡಾಲರ್‌ ಸಿಗಬೇಕು ಎಂದು ತೀರ್ಪಿನಲ್ಲಿ ಹೇಳುತ್ತದೆ (ಅಂದರೆ ಸುಮಾರು 10 ಕೋಟಿ). ಇಷ್ಟೇ ಅಲ್ಲದೆ, ಅದಕ್ಕೆ ಬಡ್ಡಿ ಸೇರಿಸಿ ನೀಡಬೇಕು ಎಂದು ನ್ಯಾಯಾಲಯ ಹೇಳುತ್ತದೆ. ಹೀಗೆ ಎಕ್ಸಿಕ್ವಿಯೆಲ್ ರಾತ್ರೋರಾತ್ರಿ ಯಾರೂ ಊಹಿಸದ ರೀತಿಯಲ್ಲಿ ಶ್ರೀಮಂತರಾಗುತ್ತಾರೆ.

ಕೃಪೆ- ಹಿಂದುಸ್ತಾನ ಟೈಮ್ಸ್ ಕನ್ನಡ

RELATED ARTICLES

LPG Gas Cylinder: ಗುಡ್‌ ನ್ಯೂಸ್: 75 ಲಕ್ಷ ಕುಟುಂಬಕ್ಕೆ ಸಿಗಲಿದೆ ಉಚಿತ LPG ಗ್ಯಾಸ್ ಸೌಲಭ್ಯ

ವಿವೇಕವಾರ್ತೆ : ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದೀಗ ಉಜ್ವಲ ಯೋಜನೆಯನ್ನು ಮತ್ತೆ ಮೂರ ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ...

ಸರಕಾರದ ಹೊಸ ಸಾಲ ಯೋಜನೆ : ಯಾವುದೇ ಅಡಮಾನವಿಲ್ಲದೇ ಸಿಗುತ್ತೆ 10 ಲಕ್ಷ ರೂಪಾಯಿ

ವಿವೇಕವಾರ್ತೆ : ಎಲ್ಲರಿಗೂ ತಮ್ಮದೇ ಉದ್ಯೋಗ ಅಥವಾ ವ್ಯವಹಾರವನ್ನು ಶುರು ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಸ್ವತಂತ್ರವಾಗಿ ವ್ಯಾಪಾರವನ್ನು (Business Loan) ಪ್ರಾರಂಭಿಸಲು ಬಯಸಿದರವರ ಬಳಿ ಹಣ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ,...

ನೀವು Whatsapp ಬಳಕೆದಾರರೇ!?- ಹಾಗಿದ್ರೆ ಮಿಸ್ ಮಾಡ್ದೆ ಸುದ್ದಿ ನೋಡಿ, ಸ್ವಲ್ಪ ಯಾಮಾರಿದ್ರೆ ಖಾತೆ ಖಾಲಿ-ಖಾಲಿ

ವಿವೇಕವಾರ್ತೆ : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರು ಟ್ಯಾಸ್ಮ್ಯಾಟ್ ಬಗ್ಗೆ ಜಾಗರೂಕರಾಗಿರಬೇಕು.. ವಾಟ್ಸಪ್ ಬಳಕೆದಾರರೇ ಎಚ್ಚರ, ಅಪರಿಚಿತ ನಂಬರ್ ಗಳಿಂದ ಬರುವ ಕರೆಗಳನ್ನು ಸ್ವೀಕರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೇ ಖಾಲಿಯಾಗಬಹುದು. ನಿಮ್ಮ ವಾಟ್ಸಾಪ್...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!