ಅಂತ್ಯಕ್ರಿಯೆಗೆ ಮುನ್ನ ಬಾಯಿಗೆ ನೀರು ಹಾಕಿದಾಗ ಉಸಿರಾಡಿದ ಮಗು; ಧಾರವಾಡದಲ್ಲಿ ಪವಾಡ?

Published on

spot_img
spot_img

ವಿವೇಕವಾರ್ತೆ : ಇದನ್ನು ಪವಾಡವೇನ್ನಬೇಕೇ? (Is is Miracle?) ವೈದ್ಯರ ನಿರ್ಲಕ್ಷ್ಯವೆನ್ನಬೇಕೇ? (Medical Negligence?_ ಹೆತ್ತ ತಂದೆ ತಾಯಿಯರ ಪುಣ್ಯದ ಫಲ ಎನ್ನಬೇಕೇ? ಗೊತ್ತಿಲ್ಲ. ಪ್ರಾಣ ಕಳೆದುಕೊಂಡಿದೆ ಎಂದು ವೈದ್ಯರು ಘೋಷಿಸಿದ ಒಂದುವರೆ ವರ್ಷದ ಕಂದಮ್ಮ ಇನ್ನೇನು ಅಂತ್ಯ ಸಂಸ್ಕಾರ (Final rites) ನಡೆಸಬೇಕು (one and Half year child breaths once again) ಎನ್ನುವ ಹೊತ್ತಿನಲ್ಲಿ ಮತ್ತೆ ಉಸಿರಾಡಿ ಜೀವ (Child Rebirth) ಪಡೆದಿದೆ!

ಧಾರವಾಡ ಜಿಲ್ಲೆಯ (Dharwad News) ನವಲಗುಂದ ತಾಲೂಕಿನ ಬಸಾಪೂರ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ದಂಪತಿಯ ಪುಟ್ಟ ಮಗು ಆಕಾಶ್‌ ಬಸವರಾಜ್‌ನನ್ನು ಕಳೆದ ಆಗಸ್ಟ್‌ 13ರಂದು ಅನಾರೋಗ್ಯದ ನಿಮಿತ್ತ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಚಿಕಿತ್ಸೆಯ ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ.

ಅನಾರೋಗ್ಯದಿಂದ ಕೂಡಿದ್ದ ಪುಟ್ಟ ಕಂದಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕೂಡಲೇ ಐಸಿಯುನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಗುವಿಗೆ ಉಸಿರಾಟವೇ ಕಷ್ಟವಾಗುತ್ತಿತ್ತು. ಹೀಗಾಗಿ ಆಕ್ಸಿಜನ್‌ ಕನೆಕ್ಟ್‌ ಮಾಡಲಾಗಿತ್ತು. ಅದರೆ, ಮಗುವಿನ ಪರಿಸ್ಥಿತಿ ಹೇಗಿತ್ತೆಂದರೆ ಒಂದೊಮ್ಮೆ ಆಕ್ಸಿಜನ್‌ ಸಂಪರ್ಕ ತೆಗೆದರೆ ಮಗು ಮೃತಪಡುತ್ತದೆ ಎನ್ನುವ ಹಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಯಾರಿಗೆ ತಾನೇ ಆಕ್ಸಿಜನ್‌ ತೆಗೆದು ಬಿಡಿ ಎಂದು ಹೇಳಲು ಸಾಧ್ಯ?

ಚಿಕಿತ್ಸೆ ಮುಂದುವರಿಸಿ, ಮಗು ಬದುಕಿ ಬರುತ್ತದೆ ಅಂತ ಮನೆಯವರು ನಂಬಿಕೆಯಿಂದ ಹೇಳಿದರು. ಯಾಕೆಂದರೆ ಹೇಗಾದರೂ ಮಗು ಮತ್ತೆ ಬದುಕಿ ಉಳಿದೀತು ಎಂಬ ವಿಶ್ವಾಸವಿತ್ತು. ಆದರೆ, ಶುಕ್ರವಾರ ಮುಂಜಾನೆ ಮಗು ತೀರಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದಾಗ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ವೈದ್ಯರು ಘೋಷಿಸಿದ ನಂತರ ಮಗುವನ್ನು ಬಸಾಪುರ ಗ್ರಾಮದ ಮನೆಗೆ ತರಲಾಯಿತು. ಕಣ್ಣೀರ ನಡುವೆ ಮಗುವಿನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳನ್ನು ನಡೆಸಲಾಯಿತು. ಮಗುವನ್ನು ಮನೆಗೆ ತಂದು ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿ ಸ್ಮಶಾನಕ್ಕೆ ಕರೆದೊಯ್ಯಲಾಯಿತು.

ಅಲ್ಲಿ ಮಗುವಿನ ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಮಗುವನ್ನು ಹೂಳಲು ಗುಂಡಿ ತೋಡಲಾಗಿತ್ತು. ಇನ್ನೇನು ಮಗುವಿನ ಪಾರ್ಥಿವ ಶರೀರವನ್ನು ಗುಂಡಿಗೆ ಇಳಿಸಬೇಕು ಎನ್ನುವಾಗ ಅದಕ್ಕೆ ಕೊನೆಯ ಬಾರಿ ಬಾಯಿಗೆ ನೀರು ಬಿಡುವ ಕಾರ್ಯಕ್ರಮ ನಡೆಸಲಾಯಿತು.

ಬಂಧುಗಳು ಕೊನೆಯ ಬಾರಿ ಬಾಯಿಗೆ ನೀರು ಬಿಡುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೇ ಮಗುವಿನಲ್ಲಿ ಚಲನೆ ಕಾಣಿಸಿಕೊಂಡಿತು. ಒಮ್ಮಿಂದೊಮ್ಮೆಗೇ ಉಸಿರಾಡಲು ಆರಂಭಿಸಿದ ಮಗು ಮಗು‌ ಕೈ ಕಾಲು ಅಲುಗಾಡಿಸಿತು. ಕಣ್ಣೆದುರೇ ಕಂಡ ಪವಾಡದಿಂದ ಆನಂದ ತುಂದಿಲರಾದ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ.

ಈ ನಡುವೆ, ಕೂಡಲೇ ಮಗುವನ್ನು ಎತ್ತಿಕೊಂಡು ಮೊದಲು ನವಲಗುಂದ ಆಸ್ಪತ್ರೆಗೆ ಬಳಿಕ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ತರಲಾಯಿತು. ಇದೀಗ ಅಲ್ಲಿ ಮಗುವಿನ ಚಿಕಿತ್ಸೆ ಮುಂದುವರಿದಿದೆ. ಮಗು ಸುರಕ್ಷಿತವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಈ ನಡುವೆ ಮಗು ಬದುಕಿ ಬಂದಿದ್ದು ಹೇಗೆ ಎನ್ನುವ ಚರ್ಚೆಯೂ ನಡೆದಿದೆ. ಇದೊಂದು ಪವಾಡ ಎಂದು ಊರಿನ ಜನ ನಂಬುತ್ತಾರೆ. ಅದೇ ಹೊತ್ತಿಗೆ ಇದು ವೈದ್ಯರ ನಿರ್ಲಕ್ಷ್ಯದ ಪರಮಾವಧಿ ಎಂಬ ದೂರೂ ಇದೆ. ಇನ್ನೂ ಜೀವಂತ ಇರುವ ಮಗುವನ್ನು ಸತ್ತಿದೆ ಎಂದು ಘೋಷಿಸಿದ್ದರ ವಿರುದ್ಧ ಆಕ್ರೋಶವಿದೆ. ಒಂದೊಮ್ಮೆ ಮಗುವಿನ ಬಾಯಿಗೆ ನೀರು ಹಾಕದೆ ಇದ್ದರೆ, ಅದರಲ್ಲಿ ಚಲನೆ ಕಾಣಿಸಿಕೊಳ್ಳದೆ ಇದ್ದರೆ ಅದನ್ನು ನೇರವಾಗಿ ಹೂಳಲಾಗುತ್ತಿತ್ತು. ಹಾಗೊಮ್ಮೆ ಮಾಡಿದ್ದಿದ್ದರೆ ಪಾಪ ಆ ಮಗು ಅದೆಷ್ಟು ಯಾತನೆ ಅನುಭವಿಸುತ್ತಿತ್ತೋ ದೇವರೇ ಬಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!